ನಿಯಮ 40: ದುರ್ಬಲತೆ ಪಿಂಚಣಿ ಸೌಲಭ್ಯ, ಅರ್ಹತೆ ಪಿಂಚಣಿಯ ವಿಧಾನ ಮತ್ತು ಮಂಜೂರಾತಿ ಇತ್ಯಾದಿ.

 1. ಮಂಡಳಿಯ ಕಾರ್ಯದರ್ಶಿಯ ಅಥವಾ ಮಂಡಳಿಯ ಪರವಾಗಿ ನೇಮಕವಾದ ಅಧಿಕೃತ ಅಧಿಕಾರಿಯು ನೋಂದಾಯಿತ ನಿರ್ಮಾಣ ಕಾರ್ಮಿಕ ಕೆಲಸದ ಸಮಯದಲ್ಲಾದ ಅಪಘಾತದಿಂದ ಅಥವಾ ಯಾವುದಾದರೂ ಖಾಯಿಲೆಯಿಂದ ಭಾಗಶಃ ದುರ್ಬಲತೆಗೆ ಒಳಗಾದಾಗ ಅವನಿಗೆ ರೂ.1000/- ದುರ್ಬಲತೆ ಪಿಂಚಣಿಯನ್ನು ಮಂಜೂರು ಮಾಡುತ್ತಾರೆ. ದುರ್ಬಲತೆ ಪರಿಹಾರ ಸಹಾಯಧನವಾಗಿ ರೂ.2 ಲಕ್ಷಕ್ಕೂ ಮೀರದೇ ಅವನ / ಅವಳ ಶೇ.ವಾರು ದುರ್ಬಲತೆಗೆ ಅನುಗುಣವಾಗಿ ಈ ಕೆಳಕಂಡ ಷರತ್ತು ನಿಭಂದನೆಗಳಿಗೆ ಒಳಪಟ್ಟು ಮಂಜೂರು ಮಾಡಬಹುದಾಗಿರುತ್ತದೆ.
  1. ನೋಂದಾಯಿತ ಫಲಾನುಭವಿಯು ನಿಯಮ 47ರಲ್ಲಿ ಪರಿಹಾರ ಸಹಾಯ ಧನ ಪಡೆದಿದ್ದಲ್ಲಿ, ಈ ನಿಯಮದಡಿ ಪರಿಹಾರ ಸಹಾಯಧನ ಪಡೆಯಲು ಸಾಧ್ಯವಿಲ್ಲ.
  2. ಅಂಗವಿಕಲತೆ ಹಾಗು ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯಿಂದ ಫಲಾನುಭವಿಯು ಗುರುತಿನ ಚೀಟಿಯನ್ನು ಪಡೆದಿರಬೇಕಾಗುತ್ತದೆ.
  3. ನೋಂದಾಯಿತ ಫಲಾನುಭವಿಯು ಮಂಡಳಿಗೆ ಸಂಪೂರ್ಣವಾಗಿ ವಂತಿಗೆಯನ್ನು ಪಾವತಿಸಿರಬೇಕಾಗುತ್ತದೆ.
 2. ಮಂಡಳಿಗೆ ಅಥವಾ ಅಧೀಕೃತ ಮಂಜೂರಾತಿ ಅಧಿಕಾರಿಗೆ ನೋಂದಾಯಿತ ಫಲಾನುಭವಿ ದುರ್ಬಲತೆಯ ಪಿಂಚಣಿಗಾಗಿ ನಮೂನೆ XIV ರಲ್ಲಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.
 3. ನೋಂದಾಯಿತ ಫಲಾನುಭವಿಯು ಸಲ್ಲಿಸಿರುವ ಅರ್ಜಿಯೊಂದಿಗಿನ ದಾಖಲೆಗಳು ಮಂಡಳಿಗೆ ಅಥವಾ ಅಧೀಕೃತ ಮಂಜೂರಾತಿ ಅಧಿಕಾರಿಗೆ ತೃಪ್ತಿಯಾದರೆ ಫಲಾನುಭವಿಗೆ ಪಿಂಚಣಿಯ ಆದೇಶವನ್ನು ಗುರುತಿನ ಚೀಟಿಯೊಂದಿಗೆ ಕಳುಹಿಸಬಹುದಾಗಿದೆ.
 4. ನೋಂದಾಯಿತ ಫಲಾನುಭವಿಯ ದುರ್ಬಲತೆಯು ಕೆಲಸದ ಸ್ಥಳದಲ್ಲಿ ಆದ ಅಪಘಾತ ಅಥವಾ ಯಾವುದಾದರೂ ಖಾಯಿಲೆಯಿಂದ ಉಂಟಾಗಿದ್ದು, ಅದರ ಶೇ.ವಾರು ದುರ್ಬಲತೆಗೆ ಅನುಗುಣವಾಗಿ ಅಂಗವಿಕಲತೆ ಹಾಗು ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯವರು ದುರ್ಬಲತೆಯ ಲೆಕ್ಕಾಚಾರ ಈ ಕೆಳಕಂಡ ಸೂತ್ರದ ಮುಖೇನ ನೀಡಲಾಗುವುದೆಂದು ಮಂಡಳಿಯ ಅಥವಾ ಅಧೀಕೃತ ಮಂಜೂರಾತಿ ಅಧಿಕಾರಿ ತೀರ್ಮಾನಿಸುತ್ತಾರೆ. ;‑
 5. Formula ರೂ.2,00,000/- ಗರಿಷ್ಠ ಮೊತ್ತ X ಅಂಗವಿಕಲತೆ ಹಾಗು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಘೋಷಣೆ ಮಾಡಿದ ಶೇ.ವಾರು ದುರ್ಬಲತೆ = ಪರಿಹಾರ ಸಹಾಯಧನ
 6. ದುರ್ಬಲತೆ ಪಿಂಚಣಿಯನ್ನು ನೋಂದಾಯಿತ ಫಲಾನುಭವಿಯ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.
 7. ನೋಂದಾಯಿತ ಫಲಾನುಭವಿಯು ಪ್ರತಿ ವರ್ಷವು ಜೀವಿತ ಪ್ರಮಾಣ ಪತ್ರ ನಮೂನೆ XIV –A (living certificate form XIV –A) ಅನ್ನು ಮಂಜೂರಾತಿ ಅಧಿಕಾರಿಗೆ ಸಲ್ಲಿಸಬೇಕು.
 8. ನೋಂದಾಯಿತ ಫಲಾನುಭವಿ 60 ವರ್ಷ ಪೂರೈಸಿದಾಗ ದುರ್ಬಲತೆ ಪಿಂಚಣಿ ನೀಡುವುದನ್ನು ನಿಲ್ಲಿಸಲಾಗುತ್ತದೆ.
 9. ದುರ್ಬಲತೆ ಪಿಂಚಣಿಯ ಮಂಜೂರಾತಿ ಪ್ರಾಧಿಕಾರವು ನಮೂನೆ XIv –B ನಲ್ಲಿ ದಾಖಲೆಯನ್ನು ನಿರ್ವಹಿಸಬೇಕಾಗುತ್ತದೆ.
 10. ದುರ್ಬಲತೆ ಪಿಂಚಣಿ ಪಡೆಯಲು ಫಲಾನುಭವಿ ಅರ್ಹನೆಲ್ಲ ಎಂದು ಕಂಡು ಬಂದಾಗ ಅವನಿಗೆ ನಿಯಮಾನುಸಾರ ಸಾಕಷ್ಟು ಕಾಲವಕಾಶವನ್ನು ನೀಡಿ ಅರ್ಜಿಯನ್ನು ತಿರಸ್ಕರಿಸಬೇಕಾಗುತ್ತದೆ.
 11. ಒಂದು ವೇಳೆ ದುರ್ಬಲತೆ ಪಿಂಚಣಿದಾರರು ಮರಣಿಸಿದರೆ ಕಾನೂನುಬದ್ದ ಅವಲಂಭಿತರು ಅಥವಾ ಉತ್ತರಾಧಿಕಾರಿಗಳು ಬ್ಯಾಂಕ್ ಖಾತೆಯನ್ನು ಮುಚ್ಚಲು ಅವರ ಮರಣ ಪ್ರಮಾಣ ಪತ್ರವನ್ನು ಮಂಡಳಿಗೆ ಸಲ್ಲಿಸಬೇಕು.