ನಿಯಮ 49-E ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಗಳಲ್ಲಿ ನೋಂದಾಯಿತ ನಿರ್ಮಾಣ ಕಾರ್ಮಿಕರ ಮಕ್ಕಳು ಪ್ರಯಾಣಿಸಲು ನೀಡುವ ರಿಯಾಯಿತಿ ಬಸ್ ಪಾಸ್ ಸೌಲಭ್ಯ

  1. ನೋಂದಾಯಿತ ನಿರ್ಮಾಣ ಕಾರ್ಮಿಕನು ರಾಜ್ಯದ ಒಂದು ಸ್ಥಳದಲ್ಲಿ ಖಾಯಂ ನಿವಾಸಿಯಾಗಿದ್ದು, ಅವನ ಇಬ್ಬರ ಮಕ್ಕಳು ವಾಸ ಸ್ಥಳದಿಂದ ರಾಜ್ಯದ ಮತ್ತೊಂದು ವ್ಯಾಸಂಗ ಮಾಡುತ್ತಿರುವ ಸ್ಥಳಕ್ಕೆ ಪ್ರಯಾಣಿಸಲು ಅವರು ಕೆ.ಎಸ್.ಆರ್.ಟಿ.ಸಿ ಬಸ್ ಪಾಸ್ ಸೌಲಭ್ಯ ಪಡೆಯಲು ನಿಯಮದಡಿ ಅರ್ಹರಾಗಿರುತ್ತಾರೆ.
  2. ನೋಂದಾಯಿತ ನಿರ್ಮಾಣ ಕಾರ್ಮಿಕ ಯಾವುದೇ ಬಾಕಿ ಇಲ್ಲದಂತೆ ಪೂರ್ಣವಾಗಿ ವಂತಿಗೆಯನ್ನು ಮಂಡಳಿಗೆ ಪಾವತಿಸಿರಬೇಕು.
  3. ಈ ಸೌಲಭ್ಯವನ್ನು ಪಡೆಯಲು ಇಚ್ಚಿಸುವ ಪಲಾನುಭವಿಯು ಕೆ.ಎಸ್.ಆರ್.ಟಿ.ಸಿ ಭರ್ತಿ ಮಾಡಿದ ಪಾಸಿನ ನಮೂನೆ ಹಾಗೂ ಅಗತ್ಯ ದಾಖಲೆಗಳೊಂದಿಗೆ ನಮೊನೆ XXIII – C ನಲ್ಲಿ ಭರ್ತಿ ಮಾಡಿದ ಅರ್ಜಿಯನ್ನು ಮಂಡಳಿಯ ಕಾರ್ಯದರ್ಶಿ ಅಥವಾ ಮಂಡಳಿಯ ಪರವಾಗಿ ನೇಮಕವಾದ ಅಧಿಕೃತ ಅಧಿಕಾರಿಗೆ ಸಲ್ಲಿಸಬೇಕು.
  4. ಕೆ.ಎಸ್.ಆರ್.ಟಿ.ಸಿ ನಿಗಧಿ ಪಡಿಸಿರುವ ವಿದ್ಯಾರ್ಥಿ ಬಸ್ ಪಾಸ್ ಭರ್ತಿ ಮಾಡಿದ ನಮೂನೆ ಮತ್ತು ದಾಖಲೆಗಳನ್ನು ನಿಯಮಾನುಸಾರ ಪರೀಕ್ಷಿಸಿ ಸರಿಯಿದೆ ಎಂದು ಮನವರಿಕೆಯಾದರೆ ಅರ್ಜಿಯನ್ನು ಕೆ.ಎಸ್.ಆರ್.ಟಿ.ಸಿ ಗೆ ಬಸ್ ಪಾಸ್ ನೀಡಲು ಮಂಡಳಿ ಶಿಫಾರಸ್ಸು ನೀಡಬೇಕು.
  5. ದಾಖಲೆಗಳು ನಿಯಮಾನುಸಾರ ಪರೀಕ್ಷಿಸಿ ಸರಿಯಿದೆ ಎಂದು ಮನವರಿಕೆಯಾದರೆ ಅರ್ಜಿಯನ್ನು ಪುರಸ್ಕರಿಸಬೇಕು. ಇಲ್ಲವಾದಲ್ಲಿ, ಅರ್ಜಿದಾರರಿಗೆ ಸಾಕಷ್ಟು ಕಾಲವಕಾಶವನ್ನು ನೀಡಿ ಅರ್ಜಿಯನ್ನು ತಿರಸ್ಕರಿಸಬೇಕು.