ನಿಯಮ 49-E ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಪ್ರಯಾಣಿಸಲು ನೋಂದಾಯಿತ ನಿರ್ಮಾಣ ಕಾರ್ಮಿಕರಿಗೆ ನೀಡುವ ರಿಯಾಯಿತಿ ಬಸ್ ಪಾಸ್ ಸೌಲಭ್ಯ – 1

  1. ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಖಾಯಂ ಆಗಿ ವಾಸವಾಗಿರುವ ನೋಂದಾಯಿತ ನಿರ್ಮಾಣ ಕಾರ್ಮಿಕನು ಬೆಂಗಳೂರಿನಲ್ಲಿ ಕೆಲಸದ ಸ್ಥಳಕ್ಕೆ ಪ್ರಯಾಣಿಸಲು ಬಿಎಂಟಿಸಿ ಬಸ್ ಪಾಸ್ ಪಡೆಯಲು ಈ ನಿಯಮದಡಿ ಅರ್ಹನಾಗಿರುತ್ತಾನೆ/ಳೆ.
  2. ನೋಂದಾಯಿತ ನಿರ್ಮಾಣ ಕಾರ್ಮಿಕ ಯಾವುದೇ ಬಾಕಿ ಇಲ್ಲದಂತೆ ಪೂರ್ಣವಾಗಿ ವಂತಿಗೆಯನ್ನು ಮಂಡಳಿಗೆ ಪಾವತಿಸಿರಬೇಕು
  3. ಈ ಸೌಲಭ್ಯವನ್ನು ಪಡೆಯಲು ನಮೂನೆ XXIII-B ಅರ್ಜಿಯೊಂದಿಗೆ ಫಲಾನುಭವಿಯ ಪಡಿತರ ಚೀಟಿ ಅಥವಾ ಚುನಾವಣೆ ಆಯೋಗದವರು ನೀಡಿರುವ ಗುರುತಿನ ಚೀಟಿ, ಆಧಾರ್ ಕಾರ್ಡ್ ಮತ್ತು ಬಿಎಂಟಿಸಿ ನಿಗಧಿ ಪಡಿಸಿರುವ ಬಸ್ ಪಾಸ್ ಭರ್ತಿ ಮಾಡಿದ ನಮೂನೆ ದಾಖಲೆಗಳನ್ನು ಮಂಡಳಿಯ ಕಾರ್ಯದರ್ಶಿ ಅಥವಾ ಮಂಡಳಿಯ ಅಧಿಕೃತ ಅಧಿಕಾರಿಗೆ ಸಲ್ಲಿಸಬೇಕು. ದಾಖಲೆಗಳನ್ನು ನಿಯಮಾನುಸಾರ ಪರೀಕ್ಷಿಸಿ ಸರಿಯಿದೆ ಎಂದು ಮನವರಿಕೆಯಾದರೆ ಅರ್ಜಿಯನ್ನು ಬಿಎಂಟಿಸಿ ಗೆ ಬಸ್ ಪಾಸ್ ನೀಡಲು ಶಿಫಾರಸ್ಸು ಮಾಡಬೇಕಾಗುತ್ತದೆ.
  4. ದಾಖಲೆಗಳನ್ನು ನಿಯಮಾನುಸಾರ ಪರೀಕ್ಷಿಸಿ ಸರಿಯಿದೆ ಎಂದು ಮನವರಿಕೆಯಾದರೆ ಅರ್ಜಿಯನ್ನು ಪುರಸ್ಕರಿಸಬೇಕು. ಇಲ್ಲವಾದಲ್ಲಿ, ಅರ್ಜಿದಾರರಿಗೆ ಸಾಕಷ್ಟು ಕಾಲವಕಾಶವನ್ನು ನೀಡಿ ಅರ್ಜಿಯನ್ನು ತಿರಸ್ಕರಿಸಬೇಕು.