1. ಮುಖ್ಯ ಕಾಯ್ದೆಯ ಕಲಂ 12 ರಡಿ ಮಂಡಳಿಯ ಫಲಾನುಭವಿಯಾಗಿ ನೋಂದಣಿ ಬಯಸುವ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕನು ನಿಯಮ 20(1) ರಡಿ ಮಂಡಳಿಯು ನಿಗಧಿ ಪಡಿಸಿದ ನಮೂನೆ V-1 ರಲ್ಲಿ ಅರ್ಜಿಯನ್ನು ಸಲ್ಲಿಸಬೇಕು.
 2. ನಿಯಮ 20(2) ರಡಿ ನೋಂದಾಯಿತ ನಿರ್ಮಾಣ ಕಾರ್ಮಿಕನು ಅರ್ಜಿಯೊಂದಿಗೆ ಈ ಕೆಳಕಂಡ ದಾಖಲೆಗಳನ್ನು ಸಲ್ಲಿಸಬೇಕು.
  1. ನೋಂದಣಿ ಶುಲ್ಕ ರೂ.25/-
  2. ವಯಸ್ಸಿನ ದೃಢೀಕರಣ ಪತ್ರ, ಶಾಲಾ ದಾಖಲಾತಿ, ವಾಹನ ಚಾಲನಾ ಪರವಾನಗಿ, ಪಾಸ್ ಪೋರ್ಟ್, ಎಪಿಕ್ ಕಾರ್ಡ್ , ಆಧಾರ್ ಕಾರ್ಡ್, ಎಲ್.ಐ.ಸಿ ವಿಮೆ ಪೋಲಿಸಿ ಅಥವಾ ಗ್ರಾಮ ಲೆಕ್ಕಿಗರು ಅಥವಾ ಕಂದಾಯ ನಿರೀಕ್ಷಕರು ಅಥವಾ ಸ್ಥಳೀಯ ಸಂಸ್ಥೆಯ ಅಧಿಕಾರಿಗಳು ಅಥವಾ ಜನನ ಮತ್ತು ಮರಣ ನೋಂದಣಾಧಿಕಾರಿಗಳಿಂದ ವಿತರಿಸಿದ ಪ್ರಮಾಣ ಪತ್ರ ಅಥವಾ ಸರ್ಕಾರಿ ಆಸ್ಪತ್ರೆ/ಇಎಸ್.ಐ ಆಸ್ಪತ್ರೆ/ಸ್ಥಳೀಯ ಸಂಸ್ಥೆಗಳ ಆಸ್ಪತ್ರೆ ಅಥವಾ ನೋಂದಾಯಿತ ಎಂಬಿಬಿಎಸ್ ಆಯುರ್ವೇಧ, ಯುನಾನಿ ಅಥವಾ ಹೋಮಿಯೋಪತಿ ವೈಧ್ಯರು, ನೋಂದಾಯಿತ ಖಾಸಗಿ ಬಿಡಿಎಸ್ ವಿಧ್ಯಾರ್ಹತೆ ಹೊಂದಿದ ದಂತ ವೈಧ್ಯರಿಂದ ಪ್ರಮಾಣ ಪತ್ರ ಇವುಗಳಲ್ಲಿ ಯಾವುದಾದರೊಂದು ದಾಖಲೆ
  3. ಕಾಮಗಾರಿ ನಡೆಯುವ ಕಟ್ಟಡದ ಮಾಲೀಕರು/ಗುತ್ತಿಗೆದಾರರು, CREDAI (Confederation of Real Estate Developers Association of India) BAI (Builders Association of India) ಅಥವಾ ಕರ್ನಾಟಕ ಸ್ಟೇಟ್ ಕಾಂಟ್ರಾಕ್ಟರ್ಸ್ ಆಸೋಸಿಯೇಷನ್ ಅಧ್ಯಕ್ಷರು/ ಕಾರ್ಯದರ್ಶಿಗಳು ನಮೂನೆ V-A ರಲ್ಲಿ ನೋಂದಾಯಿತ ಕಾರ್ಮಿಕ ಸಂಘ, ನಮೂನೆ V-B ಸಂಬಂಧಪಟ್ಟ ಕಾರ್ಯವ್ಯಾಪ್ತಿಯ ಹಿರಿಯ/ಕಾರ್ಮಿಕ ನಿರೀಕ್ಷಕರು, ನಮೂನೆ V-C ರಲ್ಲಿ ಹಾಗು ಗ್ರಾಮಪಂಚಾಯತಿ ಅಭಿವೃದ್ದಿ ಅಧಿಕಾರಿ ಅಥವಾ ಪಂಚಾಯತಿ ಕಾರ್ಯದರ್ಶಿರವರಿಂದ V-D ರಲ್ಲಿ ಉದ್ಯೋಗ ದೃಢೀಕರಣ ಪತ್ರ ಪಡೆಯುವುದು.
  4. ಮೂರು ಪಾಸ್ ಪೋರ್ಟ್ ಅಳತೆಯ ಭಾವ ಚಿತ್ರಗಳು
  5. ಸ್ವಯಂ ದೃಢೀಕೃತ ಆಧಾರ್ ಕಾರ್ಡ್
 3. ನೋಂದಾಯಿತ ಫಲಾನುಭವಿಯ ಕುಟುಂಬದಲ್ಲಿ ನಾಮನಿರ್ದೇಶಿತರ ಬದಲಾವಣೆಬೇಕೆಂದಾಗ ಶಾಸನಬದ್ಧ ನಾಮನಿರ್ದೇಶಿತನ್ನು ನಮೂನೆ VII ರಲ್ಲಿ ಭರ್ತಿ ಮಾಡಿ ಮಂಡಳಿಗೆ ಸಲ್ಲಿಸಬೇಕು.
 4. ಮಂಡಳಿಯ ಕಾರ್ಯದರ್ಶಿಯ ಅಥವಾ ಮಂಡಳಿಯ ಪರವಾಗಿ ನೇಮಕವಾದ ಅಧಿಕೃತ ಅಧಿಕಾರಿಯು ಪ್ರತಿ ನೋಂದಾಯಿತ ನಿರ್ಮಾಣ ಕಾರ್ಮಿಕನಿಗೆ ಅವನ ಭಾವ ಚಿತ್ರ ಅಂಟಿಸಿದ ಗುರುತಿನ ಚೀಟಿಯನ್ನು ನಮೂನೆ VII ರಲ್ಲಿ ನೀಡುವುದು.
 5. ಮಂಡಳಿಯ ಕಾರ್ಯದರ್ಶಿಯ ಅಥವಾ ಮಂಡಳಿಯ ಪರವಾಗಿ ನೇಮಕವಾದ ಅಧಿಕೃತ ಅಧಿಕಾರಿಯು ನೋಂದಾಯಿತ ನಿರ್ಮಾಣ ಕಾರ್ಮಿಕನ ಹೆಸರು ಮತ್ತು ವಿಳಾಸಗಳೊಳಗೊಂಡ ಎಲ್ಲಾ ಮಾಹಿತಿಯನ್ನು ನಮೂನೆ IX ರಲ್ಲಿ ದಾಖಲಿಸಿ, ಪ್ರಮುಖ ದಾಖಲೆಯೆಂದು ಪರಿಗಣಿಸಿ ನಿರ್ವಹಿಸಬೇಕು.
 6. ಮಂಡಳಿಯು ನೋಂದಾಯಿತ ನಿರ್ಮಾಣ ಕಾರ್ಮಿಕನಿಗೆ ಸೂಕ್ತವಾದ ಸ್ಮಾರ್ಟ್ ಕಾರ್ಡ್ ಅನ್ನು ನಮೂನೆ VIII-(A) ನೀಡಬೇಕು. ನೋಂದಣಿ ಪ್ರಕ್ರಿಯೆ ಮತ್ತು ಸೌಲಭ್ಯದ ವಿಲೇಯನ್ನು ಡಿಜಿಟೈಜ್ ಮತ್ತು ಡೇಟಾಬೇಸ್ ಮಾಡಿ, ಸೂಕ್ತವಾದ ತಂತ್ರಾಂಶವನ್ನು ಅದೇ ರೀತಿಯಲ್ಲಿ ನಿರ್ವಹಿಸಲು ವೆಬ್ ಅಪ್ಲಿಕೇಶನ್ನೊಂದಿಗೆ ರಚಿಸಬೇಕು.

ನಿಯಮ 20A : ನೋಂದಾಯಿತ ನಿರ್ಮಾಣ ಕಾರ್ಮಿಕನ ಹಾಲಿ ನೋಂದಣಿಯನ್ನು ಮುಂದುವರೆಸಲು ಸಲುವಾಗಿ ಪಡೆಯುವ ಉದ್ಯೋಗ ಪ್ರಮಾಣ ಪತ್ರ

 1. ಅಧಿನಿಯಮ 14 ರ ಉದ್ದೇಶವನ್ನು ಪೂರೈಸಲು ಸಲುವಾಗಿ ನೋಂದಾಯಿತ ಫಲಾನುಭವಿಯು ಉದ್ಯೋಗ ಪ್ರಮಾಣ ಪತ್ರ V(A) V(B) V(C) V(D) ಜೊತೆಗೆ ವರ್ಷದಲ್ಲಿ 90 ದಿನಗಳ ಹೆಚ್ಚಿಗೆ ನಿರ್ಮಾಣ ಕಾಮಗಾರಿಗಳಲ್ಲಿ ಕೆಲಸ ನಿರ್ವಹಿಸಿದ ಸಾಕ್ಷಿಗಾಗಿ ನಿಯೋಜಕರಿಂದ ಪಡೆದ ವೇತನ ಚೀಟಿ ಅಥವಾ ಹಾಜರಾತಿ ಪ್ರತಿಯನ್ನು ನಮೂನೆ V(E) ನಲ್ಲಿ ಲಗತ್ತಿಸಿ ಹಾಲಿ ನೋಂದಣಿಯನ್ನು ಪುನಶ್ಚೇತನಗೊಳಿಸಬೇಕು.

ನಿಯಮ 21 :

 1. ಒಂದು ವೇಳೆ, ನಿಯಮ 20(4) ರಡಿ ನೋಂದಾಯಿತ ಕಾರ್ಮಿಕ ಪಡೆದಿರುವ ಗುರುತಿನ ಚೀಟಿಯನ್ನು ಕಳೆದುಕೊಂಡಲ್ಲಿ, ನಮೂನೆ V(F) ರಲ್ಲಿ ಅರ್ಜಿಯನ್ನು ಸಲ್ಲಿಸಿನಕಲಿ ಸ್ಮಾರ್ಟ್ ಕಾರ್ಡನ್ನು ಪಡೆಯಬಹುದು. ಫಲಾನುಭವಿ ಮರಣ ಅಪ್ಪಿದಲ್ಲಿ , ಅವನ/ಅವಳ ನಾಮನಿರ್ದೇಳಿತ ಅರ್ಜಿಸಲ್ಲಿಸಬಹುದು. ನಕಲಿ ಸ್ಮಾರ್ಟ್ ಕಾರ್ಡ ಪಡೆಯಲು ರೂ. 50/- ಮಾತ್ರ ಸಲ್ಲಿಸ ಬೇಕಾಗುತ್ತದೆ

ನಿಯಮ 21-A(i):

 1. ನಿಯಮ 20 ರಡಿಯಲ್ಲಿ ಫಲಾನುಭವಿ ನೋಂದಣಿಯಾದ ನಿರ್ಮಾಣ ಕಾರ್ಮಿಕರು ಪ್ರತಿ ವರ್ಷ ನೋಂದಣಿಯನ್ನು ಪುನಶ್ಚೇತನಗೊಳಿಸಲು ರೂ.25/- ಗಳನ್ನು ಪಾವತಿಸಬೇಕು.
 2. ನೋಂದಾಯಿತ ಫಲಾನುಭವಿಯು ಒಂದು ವರ್ಷದ ವರೆಗೂ ವಂತಿಗೆ ಪಾವತಿಸದಿದ್ದಲ್ಲಿ, ಅವನು ಮಂಡಳಿಯ ಫಲಾನುಭವಿಯಾಗಿ ಮುಂದುವರೆಯಲು ಸಾಧ್ಯವಿಲ್ಲ. ಆದರೆ, ಮಂಡಳಿಯ ಪರವಾಗಿ ನೇಮಕವಾದ ಅಧಿಕೃತ ಅಧಿಕಾರಿಯಿಂದ ಅನುಮತಿ ಪಡೆದು ರೂ.2/- ಗಳ ದಂಢದೊಂದಿಗೆ ಬಾಕಿ ಇರುವ ವಂತಿಗೆಯನ್ನು ಪಾವತಿಸಿದಾಗ ನೋಂದಣಿಯನ್ನು ಪುನಶ್ಚೇತನಗೊಳಿಸಬಹುದಾಗಿರುತ್ತದೆ. ಈ ಸೌಲಭ್ಯವನ್ನು ಸದಸ್ಯತ್ವ ಅವಧಿಯಲ್ಲಿ ಎರಡು ಬಾರಿ ಮಾತ್ರ ಪಡೆಯಬಹುದಾಗಿದೆ.

ನಿಯಮ 22 :

 1. ಪ್ರತಿಯೊಬ್ಬ ನಿಯೋಜಕನು ತಾನು ಕೈಗೊಂಡಿರುವ ಕಟ್ಟಡ ಅಥವಾ ಇತರ ನಿರ್ಮಾಣ ಕಾರ್ಯದಲ್ಲಿ ನೇಮಕ ಮಾಡಲಾಗಿರುವ ಫಲಾನುಭವಿಗಳ ಉದ್ಯೋಗ ವಿವರಗಳನ್ನು ನಿಗದಿಪಡಿಸಿರುವ ನಮೂನೆ X ರಲ್ಲಿ ನಿರ್ವಹಿಸ ತಕ್ಕದ್ದು ಆಗಿರುತ್ತದೆ.