ನಿಯಮ 43- A ನೋಂದಾಯಿತ ಮಹಿಳಾ ಕಾರ್ಮಿಕಳ ಮಗುವಿನ ಪೌಷ್ಠಿಕಾಂಶದ ಪೂರೈಕೆಗಾಗಿ ಹಾಗು ಪೂರ್ವ ಪ್ರಾಥಮಿಕ ಶಿಕ್ಷಣಕ್ಕಾಗಿ ನೀಡುವ ಸಹಾಯ ಧನ (ತಾಯಿ ಮಗು ಸಹಾಯ ಹಸ್ತ)

  1. ನೋಂದಾಯಿತ ಮಹಿಳಾ ಕಾರ್ಮಿಕಳ ಮಗುವಿನ ಹೆರಿಗೆಯ ಸಮಯದಿಂದ ಮೂರು ವರ್ಷಗಳ ಅವಧಿಯವರೆಗೆ ಮಗುವಿನ ಪೂರ್ವ ಪ್ರಾಥಮಿಕ ಶಿಕ್ಷಣ ಮತ್ತು ಪೌಷ್ಠಿಕಾಂಶದ ಪೂರೈಕೆಗಾಗಿ ಸಹಾಯ ಧನವನ್ನು ಪಡೆಯಲು ಅರ್ಹರಾಗಿರುತ್ತಾಳೆ.
  2. ಒಟ್ಟು ಮೊತ್ತವು ರೂ.6000/- ಆಗಿರುತ್ತದೆ. (ಪ್ರತಿ ತಿಂಗಳು 500/- ರೂ ಅಂತೆ ಮಂಜೂರಾತಿ ಅಧಿಕಾರಿಯು ನೋಂದಾಯಿತ ಮಹಿಳಾ ಫಲಾನುಭವಿಗೆ ಮಂಜೂರು ಮಾಡಬೇಕು).
  3. ನೋಂದಾಯಿತ ಮಹಿಳಾ ಕಾರ್ಮಿಕಳು ಎರಡು ಬಾರಿ ಮಾತ್ರ ಸಹಾಯ ಧನವನ್ನು ಪಡೆಯಲು ಅರ್ಹರಾಗಿರುತ್ತಾರೆ (ಮೊದಲ ಎರಡು ಮಕ್ಕಳ ಜನನಕ್ಕಾಗಿ ಮಾತ್ರ).
  4. ಅರ್ಜಿಯು ಜನನ ಮತ್ತು ಮರಣ ನೋಂದಾಣಾ ಅಧಿಕಾರಿಯಿಂದ ಪಡೆದ ಜನನ ಪ್ರಮಾಣ ಪತ್ರವನ್ನು ಒಳಗೊಂಡಿರಬೇಕು.
  5. ಈ ಸೌಲಭ್ಯವನ್ನು ಪಡೆಯಲು ಅರ್ಹರಾದ ಮಹಿಳಾ ಫಲಾನುಭವಿಯು ಮಂಡಳಿಯ ಕಾರ್ಯದರ್ಶಿ ಅಥವಾ ಮಂಡಳಿಯ ಪರ ಅಧೀಕೃತ ಮಂಜೂರಾತಿ ಅಧಿಕಾರಿಗೆ ನಮೂನೆ XVII –A ರಲ್ಲಿ ಅರ್ಜಿಯನ್ನು ಸಲ್ಲಿಸಬೇಕು.