ಈ ಕೆಳಕಂಡಂತೆ ವಿವಿಧ ಹಕ್ಕುಸಾಧನಾ (Claim Applications) ಅರ್ಜಿಗಳನ್ನು ಸಲ್ಲಿಸಲು ಕಾಲ ಮಿತಿಯನ್ನು ಸೂಚಿಸಿದೆ.

ನಿಯಮ 39 - ಪಿಂಚಣಿ ಸೌಲಭ್ಯ, ಅರ್ಹತೆ, ಪಿಂಚಣಿಯ ವಿಧಾನ ಮತ್ತು ಮಂಜೂರಾತಿ ಇತ್ಯಾದಿ.

  1. ಫಲಾನುಭವಿ 60 ವರ್ಷ ದಾಟಿದ 06 ತಿಂಗಳ ಒಳಗೆ ಅರ್ಜಿ ಸಲ್ಲಿಸುವುದು. (ಫಲಾನುಭವಿ 60 ವರ್ಷ ವಯಸ್ಸು ದಾಟುವ 03 ತಿಂಗಳ ಮುನ್ನ ಅರ್ಜಿಯನ್ನು ಸಲ್ಲಿಸಬೇಕು).

ನಿಯಮ 40 – ದುರ್ಬಲತೆ ಪಿಂಚಣಿ ಸೌಲಭ್ಯ, ಅರ್ಹತೆ ಪಿಂಚಣಿಯ ವಿಧಾನ ಮತ್ತು ಮಂಜೂರಾತಿ ಇತ್ಯಾದಿ.

  1. ಅಂಗವಿಕಲತೆ ಹಾಗು ಹಿರಿಯ ನಾಗರೀಕರ ಸಬಲೀಕರಣ ಪ್ರಾಧಿಕಾರ ಫಲಾನುಭವಿಗೆ ಗುರುತಿನಚೀಟಿ ನೀಡಿದ ದಿನಾಂಕದಿಂದ 06 ತಿಂಗಳ ಒಳಗೆ ಅರ್ಜಿಯನ್ನು ಸಲ್ಲಿಸಬೇಕು.

ನಿಯಮ 43 - ನೋಂದಾಯಿತ ನಿರ್ಮಾಣ ಮಹಿಳಾ ಕಾರ್ಮಿಕರ ಮಗುವಿನ ಹೆರಿಗೆಗೆ ನೀಡುವ ಸಹಾಯ ಧನ

  1. ಮಗುವಿನ ಹೆರಿಗೆಯಾದ 06 ತಿಂಗಳ ಒಳಗೆ ಅರ್ಜಿಯನ್ನು ಸಲ್ಲಿಸಬೇಕು.

ನಿಯಮ 44 - ನೋಂದಾಯಿತ ನಿರ್ಮಾಣ ಕಾರ್ಮಿಕನ ಅಂತ್ಯಕ್ರಿಯೆ ವೆಚ್ಚವನ್ನು ಭರಿಸಲು ಹಾಗು ಪರಿಹಾರ ಧನವಾಗಿ (ಅನುಗ್ರಹ ರಾಶಿ) ನೀಡುವ ಸಹಾಯಧನ

  1. ಫಲಾನುಭವಿ ಮೃತನಾಗಿ 01 ವರ್ಷ ಒಳಗೆ ಅರ್ಜಿಯನ್ನು ಸಲ್ಲಿಸಬೇಕು.

ನಿಯಮ 45 - ಶೈಕ್ಷಣಿಕ ಸಹಾಯ ಧನ ನೋಂದಾಯಿತ ನಿರ್ಮಾಣ ಕಾರ್ಮಿಕನ ಮಗ ಅಥವಾ ಮಗಳ ಶಿಕ್ಷಣಕ್ಕಾಗಿ ನೀಡುವ ಸಹಾಯಧನ

  1. ಮುಂದಿನ ಶೈಕ್ಷಣಿಕ ವರ್ಷದ 06 ತಿಂಗಳ ಒಳಗೆ ಅರ್ಜಿಯನ್ನು ಸಲ್ಲಿಸಬೇಕು.

ನಿಯಮ 46 - ವೈದ್ಯಕೀಯ ಸಹಾಯಧನ (ಕಾರ್ಮಿಕ ಆರೋಗ್ಯ ಭಾಗ್ಯ)

  1. ಫಲಾನುಭವಿ ಆಸ್ಪತ್ರೆಗೆ ದಾಖಲಾದ ದಿನಾಂಕದಿಂದ 06 ತಿಂಗಳ ಒಳಗೆ ಅರ್ಜಿಯನ್ನು ಸಲ್ಲಿಸಬೇಕು.

ನಿಯಮ 47 - ಫಲಾನುಭವಿಗೆ ಅಪಘಾತದಿಂದ ಸಂಭವಿಸ ಬಹುದಾದ ಮರಣ ಅಥವಾ ಶಾಶ್ವತ / ಭಾಗಶಃ ದುರ್ಬಲತೆಗೆ ನೀಡುವ ಸಹಾಯಧನ.

  1. ಅಪಘಾತವಾದ 01 ವರ್ಷ ಒಳಗೆ ಅರ್ಜಿಯನ್ನು ಸಲ್ಲಿಸಬೇಕು.

ನಿಯಮ – 48 ನೋಂದಾಯಿತ ನಿರ್ಮಾಣ ಕಾರ್ಮಿಕನ ಹಾಗು ಅವನ / ಅವಳ ಅವಲಂಭಿತರ ಪ್ರಮುಖ ಖಾಯಿಲೆಗಳ ವೆಚ್ಚಕ್ಕಾಗಿ ನೀಡುವ ವೈಧ್ಯಕೀಯ ಸಹಾಯ ಧನ (ಕಾರ್ಮಿಕ ಚಿಕಿತ್ಸಾ ಭಾಗ್ಯ)

  1. ಫಲಾನುಭವಿಯು ಆಸ್ಪತ್ರೆಯಿಂದ ಬಿಡುಗಡೆಯಾದ 06 ತಿಂಗಳ ಒಳಗೆ ಅರ್ಜಿಯನ್ನು ಸಲ್ಲಿಸಬೇಕು.

ನಿಯಮ – 49 ನೋಂದಾಯಿತ ನಿರ್ಮಾಣ ಕಾರ್ಮಿಕನ ಮೊದಲ ಮದುವೆ ಅಥವಾ ಅವನ /ಅವಳ ಅವಲಂಭಿತರಿಗೆ ನೀಡುವ ಸಹಾಯ ಧನ

  1. ಮದುವೆಯಾದ 06 ತಿಂಗಳ ಒಳಗೆ ಅರ್ಜಿಯನ್ನು ಸಲ್ಲಿಸಬೇಕು.