ನಿಯಮ 44 - ನೋಂದಾಯಿತ ನಿರ್ಮಾಣ ಕಾರ್ಮಿಕನ ಅಂತ್ಯಕ್ರಿಯೆ ವೆಚ್ಚವನ್ನು ಭರಿಸಲು ಹಾಗು ಪರಿಹಾರ ಧನವಾಗಿ (ಅನುಗ್ರಹ ರಾಶಿ) ನೀಡುವ ಸಹಾಯಧನ

  1. ಮಂಡಳಿಯ ಕಾರ್ಯದರ್ಶಿ ಅಥವಾ ಮಂಡಳಿಯ ಪರವಾಗಿ ನೇಮಕವಾದ ಅಧಿಕೃತ ಅಧಿಕಾರಿಯು ಮರಣಕ್ಕೀಡಾದಗ ನೋಂದಾಯಿತ ನಿರ್ಮಾಣ ಕಾರ್ಮಿಕನ ಅಂತ್ಯಕ್ರಿಯೆ ವೆಚ್ಚವನ್ನು ಭರಿಸಲು ರೂ.4000/-ಗಳನ್ನು ಹಾಗು ಮರಣದಿಂದ ಕುಟುಂಬದಲ್ಲಿ ಆಗುವ ಆರ್ಥಿಕ ಸಂಕಷ್ಟವನ್ನು ಎದುರಿಸಲು ಅನುಗ್ರಹ ರಾಶಿಯೆಂದು ರೂ.50,000/- ಗಳನ್ನು ಶಾಸನಬದ್ಧ ನಾಮನಿರ್ದೇಶಿತನಿಗೆ ಮಂಜೂರು ಮಾಡುವುದು. ನೋಂದಾಯಿತ ನಿರ್ಮಾಣ ಕಾರ್ಮಿಕನ ನಾಮನಿರ್ದೇಶಿತನು ಮರಣ ಪ್ರಮಾಣಪತ್ರ ಹಾಗು ಮೂಲ ಗುರುತಿನ ಚೀಟಿಯೊಂದಿಗೆ ನಮೂನೆ 20 ರಲ್ಲಿ ಅರ್ಜಿಯನ್ನು ಪ್ರಾಧಿಕಾರಕ್ಕೆ ಸಲ್ಲಿಸಬೇಕಾಗುತ್ತದೆ.