ನಿಯಮ 45: ನೋಂದಾಯಿತ ನಿರ್ಮಾಣ ಕಾರ್ಮಿಕನ ಮಗ ಅಥವಾ ಮಗಳ ಶಿಕ್ಷಣದ ನೆರವು.

 1. ಮಂಡಳಿಯ ಕಾರ್ಯದರ್ಶಿಯ ಅಥವಾ ಮಂಡಳಿಯ ಪರವಾಗಿ ನೇಮಕವಾದ ಅಧಿಕೃತ ಅಧಿಕಾರಿ ನೋಂದಾಯಿತ ಫಲಾನುಭವಿಯಿಂದ ಶೈಕ್ಷಣಿಕ ಸಹಾಯ ಧನದ ಅರ್ಜಿಯನ್ನು ಸ್ವೀಕರಿಸಿ, ಅವಲಂಭಿತ ಅರ್ಹ ಎರಡು ಮಕ್ಕಳಿಗೆ ಪ್ರತಿ ವರ್ಷ ಸಹಾಯ ಧನವನ್ನು ಮಂಜೂರು ಮಾಡಬೇಕಾಗುತ್ತದೆ. ‘ಕಲಿಕಾ’ ಯೋಜನೆಯಡಿಯಲ್ಲಿ ವಾರ್ಷಿಕ ಶೈಕ್ಷಣಿಕ ಸಹಾಯಧನ ಮತ್ತು ಪ್ರತಿಭಾ ಸಹಾಯಧನವನ್ನು ನೀಡುವುದು ( ಸರ್ಕಾರದ ಅಧಿಸೂಚನೆ ದಿನಾಂಕ 14-12-2019 ರಂತೆ ಶೈಕ್ಷಣಿಕ ಸಹಾಯಧನ ದರಗಳು ಸರ್ಕಾರದ ಪ್ರಕಟನೆ ಅನುಗುಣವಾಗಿರುತ್ತದೆ) .
  1. 1ನೇ ತರಗತಿ ಉತ್ತೀರ್ಣರಾದವರಿಗೆ 2000/-
  2. 2ನೇ ತರಗತಿ ಉತ್ತೀರ್ಣರಾದವರಿಗೆ 2000/-
  3. 3ನೇ ತರಗತಿ ಉತ್ತೀರ್ಣರಾದವರಿಗೆ 2000/-
  4. 4ನೇ ತರಗತಿ ಉತ್ತೀರ್ಣರಾದವರಿಗೆ 3000/-
  5. 5ನೇ ತರಗತಿ ಉತ್ತೀರ್ಣರಾದವರಿಗೆ 3000/-
  6. 6ನೇ ತರಗತಿ ಉತ್ತೀರ್ಣರಾದವರಿಗೆ 3000/-
  7. 7ನೇ ತರಗತಿ ಉತ್ತೀರ್ಣರಾದವರಿಗೆ 4000/-
  8. 8ನೇ ತರಗತಿ ಉತ್ತೀರ್ಣರಾದವರಿಗೆ 4000/-
  9. 9ನೇ ತರಗತಿ ಉತ್ತೀರ್ಣರಾದವರಿಗೆ 6000/-
  10. 10ನೇ ತರಗತಿ ಉತ್ತೀರ್ಣರಾದವರಿಗೆ 6000/-
  11. ಪ್ರಥಮ ಪಿಯುಸಿ ಉತ್ತೀರ್ಣರಾದವರಿಗೆ 6000/-
  12. ದ್ವಿತೀಯ ಪಿಯುಸಿ ಉತ್ತೀರ್ಣರಾದವರಿಗೆ 8000/-
  13. ಐಟಿಐ ಮತ್ತು ಡಿಪ್ಲೊಮೊ ಉತ್ತೀರ್ಣರಾದವರಿಗೆ ಪ್ರತಿ ವರ್ಷಕ್ಕೆ 7000/-
  14. ಪದವಿ ಉತ್ತೀರ್ಣರಾದವರಿಗೆ ಪ್ರತಿ ವರ್ಷಕ್ಕೆ 10,000/-
  15. ಇಂಜಿನಿಯರಿಂಗ್ ಕೋರ್ಸ್ ಸೇರ್ಪಡೆಗೆ ರೂ.25,000/- ಹಾಗು ಪ್ರತಿ ವರ್ಷ ತೇರ್ಗಡೆಗೆ ರೂ.20,000/-
  16. ವೈದ್ಯಕೀಯ ಕೋರ್ಸ್ ಸೇರ್ಪಡೆಗೆ ರೂ.30,000/- ಹಾಗು ಪ್ರತಿ ವರ್ಷ ತೇರ್ಗಡೆಗೆ ರೂ.25000/-
  17. ಸ್ನಾತಕೋತ್ತರ ಪದವಿ ಸೇರ್ಪಡೆಗೆ ರೂ.20,000/- ಹಾಗು ಪ್ರತಿ ವರ್ಷ ರೂ.10,000/- ಗಳಂತೆ (ಎರಡು ವರ್ಷಗಳಿಗೆ)
  18. ಪಿಹೆಚ್.ಡಿ ಕೋರ್ಸ್ ಪ್ರತಿ ವರ್ಷಕ್ಕೆ ರೂ.20000/- (ಗರಿಷ್ಠ ಎರಡು ವರ್ಷಗಳು) ಮತ್ತು ಪಿ.ಹೆಚ್.ಡಿ ಪ್ರಭಂಧ ಸ್ವೀಕಾರದ ನಂತರ ಹೆಚ್ಚುವರಿಯಾಗಿ ರೂ.20,000/-

  ಪ್ರತಿಭಾವಂತ ಮಕ್ಕಳಿಗಾಗಿ

  1. ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ತರಗತಿಯಲ್ಲಿ ಶೇ.75 ಅಂಕ ಪಡೆದವರಿಗೆ ರೂ.5000/-
  2. ಪಿಯುಸಿ ಅಥವಾ ತತ್ಸಮಾನ ತರಗತಿಯಲ್ಲಿ ಶೇ.75 ಅಂಕ ಪಡೆದವರಿಗೆ ರೂ.7000/-
  3. ಪದವಿ ಅಥವಾ ತತ್ಸಮಾನ ಕೋರ್ಸ್ ನಲ್ಲಿ ಶೇ.75 ಅಂಕ ಪಡೆದವರಿಗೆ ರೂ.10,000/-
  4. ಸ್ನಾತಕೋತ್ತರ ಪದವಿ ಅಥವಾ ತತ್ಸಮಾನ ಕೋರ್ಸ್ ನಲ್ಲಿ ಶೇ.75 ಅಂಕ ಪಡೆದವರಿಗೆ ರೂ.15,000/-
 2. ಕೆಳಗಿನ ನಿಯಮಗಳನ್ನು ಪೂರ್ಣಗೊಳಿಸಿದರೆ ಉಪ-ನಿಯಮ (1) ಅಡಿಯಲ್ಲಿರುವ ಮೊತ್ತವನ್ನು ಮಂಜೂರು ಮಾಡಲಾಗುತ್ತದೆ.
  1. ನೋಂದಾಯಿತ ನಿರ್ಮಾಣ ಕಾರ್ಮಿಕರ ಅರ್ಹ ಇಬ್ಬರು ಮಕ್ಕಳಿಗೆ ಸಹಾಯಧನ ನೀಡಲಾಗುವುದು;
  2. ನೋಂದಾಯಿತ ನಿರ್ಮಾಣ ಕಾರ್ಮಿಕರ ಮಂಡಳಿಗೆ ಪಾವತಿಸಬಹುದಾದ ಯಾವುದೇ ವಂತಿಗೆಯನ್ನು ಬಾಕಿ ಇರಿಸಿಕೊಂಡಿರಬಾರದು.
 3. ಉಪ-ನಿಯಮ (1) ರಲ್ಲಿ ನಿಗಧಿ ಪಡಿಸಿರುವ ಸಹಾಯ ಧನವನ್ನು ಪಡೆಯಲು ನಮೂನೆ XIX ರಲ್ಲಿ ಅರ್ಜಿಯನ್ನು ಸಲ್ಲಿಸಬೇಕು.
 4. ಕರ್ನಾಟಕ ರಾಜ್ಯದಲ್ಲಿ ಭೌತಿಕವಾಗಿ ಆರಂಭವಾಗಿರುವ ಹಾಗು ಸರ್ಕಾರದಿಂದ ನೋಂದಾಯಿತ ಶಾಲಾ ಕಾಲೇಜುಗಳಲ್ಲಿ ಪ್ರಸ್ತುತ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ಫಲಾನುಭವಿಗಳ 02 ಮಕ್ಕಳಿಗೆ ಮಾತ್ರ ಶೈಕ್ಷಣಿಕ ಸಹಾಯಧನವನ್ನು ನೀಡಬಹುದಾಗಿರುತ್ತದೆ. ದೂರ ಶಿಕ್ಷಣ, ಆನ್ ಲೈನ್ ಶಿಕ್ಷಣ, ಹೋಂ ಸ್ಟಡಿ, ಇತ್ಯಾದಿ ವ್ಯಾಸಂಗದಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೆ ಈ ಸೌಲಭ್ಯವು ಲಭ್ಯವಾಗುವುದಿಲ್ಲ.
 5. ಪೂರಕ ದಾಖಲಾತಿಗಳು:
 6. ಮಂಡಳಿ ನೀಡಿರುವ ಗುರುತಿನ ಚೀಟಿ/ಸ್ಮಾರ್ಟ್ ಕಾರ್ಡ್
 7. ರೇಷನ್ ಕಾರ್ಡ್
 8. ಉದ್ಯೋಗ ದೃಡೀಕರಣ ಪತ್ರ
 9. ಬ್ಯಾಂಕ್ ಖಾತೆಯ ಪುರಾವೆ
 10. ಮೊದಲ ಮಗುವಿನ ಶಿಕ್ಷಣದ ವಿವರಗಳು
 11. ಎರಡನೇ ಮಗುವಿನ ಶಿಕ್ಷಣದ ವಿವರಗಳು
 12. ಮೊದಲ ಮಗುವಿನ ಛಾಯಾಚಿತ್ರ
 13. ಎರಡನೇ ಮಗುವಿನ ಛಾಯಾಚಿತ್ರ
 14. ಅಂಕಪಟ್ಟಿ ಮತ್ತು ವ್ಯಾಸಂಗ ಪ್ರಮಾಣ ಪತ್ರ
 15. ಮುಂದಿನ ಶೈಕ್ಷಣಿಕ ವರ್ಷದ ಆರು ತಿಂಗಳೊಳಗೆ ಅರ್ಜಿಯನ್ನು ಸಲ್ಲಿಸುವುದು
 16. ಅರ್ಜಿ ಶುಲ್ಕ : NA
  ವಿತರಣಾ ಸಮಯ (ದಿನಗಳು): 45
  ಅನ್ವಯಿಸುವ ವಿಧಾನ:
 17. ಅರ್ಜಿದಾರರು ಅರ್ಜಿಯನ್ನು ಸಲ್ಲಿಸುವುದು
 18. ವಂತಿಗೆ ಪ್ರಮಾಣ ಪತ್ರವನ್ನು ಹಿರಿಯ/ಕಾರ್ಮಿಕ ನಿರೀಕ್ಷಕರಿಂದ ಸಲ್ಲಿಸುವುದು
 19. ಹಿರಿಯ/ಕಾರ್ಮಿಕ ನಿರೀಕ್ಷಕರಿಂದ ಅರ್ಜಿ ಪ್ರಕ್ರಿಯೆ ಮತ್ತು ಪರಿಶೀಲನೆ ಮಾಡಲಾಗುವುದು
 20. ಕಾರ್ಮಿಕ ನಿರೀಕ್ಷಕರಿಂದ ಪರಿಶೀಲನಾ ವರದಿ ಸಿದ್ಧಪಡಿಸಲಾಗುವುದು (ಅಗತ್ಯವಿದ್ದಲ್ಲಿ)
 21. ಕಾರ್ಮಿಕ ಅಧಿಕಾರಿಯವರಿಂದ ಪರಿಶೀಲನೆ ಮತ್ತು ಅನುಮೋದನೆ