ನಿಯಮ 42: ನೋಂದಾಯಿತ ನಿರ್ಮಾಣ ಕಾರ್ಮಿಕರು ಮನೆ ಕೊಳ್ಳಲು ಮತ್ತು ಕಟ್ಟಲು ನೀಡುವ ಸಹಾಯಧನ

  1. ಅರ್ಹತೆ: ಕನಿಷ್ಠ 45 ವರ್ಷ ವಯಸ್ಸಿನ ಹಾಗು ನಿವೃತ್ತಿಗೆ ಮುನ್ನ 15 ವರ್ಷಗಳ ಸೇವೆ ಹೊಂದಿರುವ ನೋಂದಾಯಿತ ನಿರ್ಮಾಣ ಕಾರ್ಮಿಕ ಮನೆ ಕೊಳ್ಳಲು ಮತ್ತು ಕಟ್ಟಲು ಸಾಲ ಮತ್ತು ಮುಂಗಡ ಹಣ ಸಹಾಯ ಧನಕ್ಕೆ ಅರ್ಜಿ ಸಲ್ಲಿಸಲು ಅರ್ಹ ನಾಗಿರುತ್ತಾನೆ. (ಕಾರ್ಮಿಕ ಗೃಹ ಭಾಗ್ಯ)
  2. ಹಕ್ಕು ಸಾಧನೆ

    1. ಉಪ ನಿಯಮ 1 ರಡಿ ಮನೆ ಕಟ್ಟಲು ಸಾಲ ಮತ್ತು ಮುಂಗಡ ಹಣದ ಸಹಾಯ ಧನಕ್ಕೆ ಅರ್ಹನಾಗಿರುವ ನೋಂದಾಯಿತ ನಿರ್ಮಾಣ ಕಾರ್ಮಿಕನು ಮಂಡಳಿಯ ಕಾರ್ಯದರ್ಶಿ ಅಥವಾ ಮಂಡಳಿಯ ಪರ ಅಧೀಕೃತ ಮಂಜೂರಾತಿ ಅಧಿಕಾರಿಗೆ ನಮೂನೆ XVI ರಲ್ಲಿ ಅರ್ಜಿ ಯನ್ನು ಸಲ್ಲಿಸಬೇಕು.
    2. ಸರ್ಕಾರಿ ಗೃಹ ಯೋಜನೆಯಡಿಯಲ್ಲಿ ಫಲಾನುಭವಿಯೆಂದು ಸಕ್ಷಮ ಪ್ರಾಧಿಕಾರದಿಂದ ಗುರುತಿಸಲ್ಪಟ್ಟ ನೋಂದಾಯಿತ ನಿರ್ಮಾಣ ಕಾರ್ಮಿಕನು ಸಕ್ಷಮ ಪ್ರಾಧಿಕಾರ ನೀಡಿರುವ ಪ್ರಮಾಣ ಪತ್ರವನ್ನು ಅರ್ಜಿಯೊಂದಿಗೆ ಲಗತ್ತಿಸಿ ಸಲ್ಲಿಸಬೇಕಾಗುತ್ತದೆ.
    3. ಮಂಡಳಿಯ ಕಾರ್ಯದರ್ಶಿಯ ಅಥವಾ ಮಂಡಳಿಯ ಪರವಾಗಿ ನೇಮಕವಾದ ಅಧಿಕೃತ ಅಧಿಕಾರಿಯು ನೋಂದಾಯಿತ ನಿರ್ಮಾಣ ಕಾರ್ಮಿಕನು ಸಲ್ಲಿಸಿರುವ ಅರ್ಜಿ ಮತ್ತು ದಾಖಲೆಗಳು ನಿಯಮಾನುಸಾರ ಸರಿಯಿದೆ ಎಂದು ಮನವರಿಕೆಯಾದರೆ ಅರ್ಜಿಯನ್ನು ಪುರಸ್ಕರಿಸಬೇಕು. ಇಲ್ಲವಾದಲ್ಲಿ, ಅರ್ಜಿದಾರರಿಗೆ ಸಾಕಷ್ಟು ಕಾಲವಕಾಶವನ್ನು ನೀಡಿ ಅರ್ಜಿಯನ್ನು ತಿರಸ್ಕರಿಸಬೇಕು.
  3. ಸರ್ಕಾರಿ ಯೋಜನೆಯಡಿಯಲ್ಲಿ ಮಂಜೂರಾದ ಸಹಾಯ ಧನಕ್ಕೆ ಮಂಡಳಿಯು ಗರಿಷ್ಠ ರೂ.2 ಲಕ್ಷಕ್ಕೆ ಮೀರದಷ್ಟು ಮುಂಗಡಹಣ ನೀಡುತ್ತದೆ. ಈ ಹಣವನ್ನು ನೇರವಾಗಿ ಸಕ್ಷಮ ಪ್ರಾಧಿಕಾರಕ್ಕೆ ನೀಡಿ ಅವರಿಂದ ಮಂಡಳಿಯು 20 ವರ್ಷಗಳಲ್ಲಿ ಸಮಾನ ವಾರ್ಷಿಕ ಕಂತುಗಳಲ್ಲಿ ಮುಂಗಡ ಹಣವನ್ನು ಮರಳಿ ಪಡೆಯಬೇಕು.