ನಿಯಮ 49: ನೋಂದಾಯಿತ ನಿರ್ಮಾಣ ಕಾರ್ಮಿಕನ ಮೊದಲ ಮದುವೆ ಅಥವಾ ಅವನ /ಅವಳ ಅವಲಂಭಿತರ ಮದುವೆಗೆ ನೀಡುವ ಸಹಾಯ ಧನ-

 1. ಮಂಡಳಿಯ ಕಾರ್ಯದರ್ಶಿಯ ಅಥವಾ ಮಂಡಳಿಯ ಪರವಾಗಿ ನೇಮಕವಾದ ಅಧಿಕೃತ ಅಧಿಕಾರಿಯು ನೋಂದಾಯಿತ ಕಾರ್ಮಿಕ ರಿಂದ ಅರ್ಜಿಯನ್ನು ಸ್ವೀಕರಿಸಿ ಫಲಾನುಭವಿಯ ಮೊದಲನೆ ಮದುವೆಗೆ ಅಥವಾ ಅವನ / ಅವಳ ಎರಡು ಅವಲಂಭಿತ ಮಕ್ಕಳಿಗೆ ಮದುವೆಯ ವೆಚ್ಚವನ್ನು ಭರಿಸಲು ಸಹಾಯಧನವಾಗಿ ರೂ.50,000/-ಮಂಜೂರು ಮಾಡಬೇಕು.
 2. ಈ ಕೆಳಕಂಡ ಷರತ್ತುಗಳನ್ನು ಪೂರೈಸಿದಾಗ ಮಾತ್ರ ಸಹಾಯ ಧನವನ್ನು ಮಂಜೂರು ಮಾಡಬೇಕಾಗುತ್ತದೆ.
  1. ನೋಂದಾಯಿತ ನಿರ್ಮಾಣ ಕಾರ್ಮಿಕನು ಮದುವೆಯ ಸಹಾಯ ಧನ ಪಡೆಯಲು ಮದುವೆಯಾದ ದಿನಾಂಕದಿಂದ ನೋಂದಣಿಯಾದ ದಿನಾಂಕದವರೆಗೆ ಒಂದು ವರ್ಷ ಸದಸ್ಯತ್ವವನ್ನು ಪೂರೈಸಿರಬೇಕು.
  2. ನೋಂದಾಯಿತ ನಿರ್ಮಾಣ ಕಾರ್ಮಿಕನ ಕುಟುಂಬವು ಎರಡು ಬಾರಿ ಮಾತ್ರ ಸಹಾಯಧನ ಪಡೆಯಲು ಸಾಧ್ಯವಾಗಿರುತ್ತದೆ. (ನೋಂದಾಯಿತ ನಿರ್ಮಾಣ ಕಾರ್ಮಿಕನ ಕುಟುಂಬದಲ್ಲಿ ಇರುವ ನೋಂದಾಯಿತ ನಿರ್ಮಾಣ ಕಾರ್ಮಿಕ ಸದಸ್ಯರನ್ನು ಲೆಕ್ಕಿಸದೆ ಒಂದು ನಿರ್ದಿಷ್ಠವಾದ ಮದುವೆಗೆ ಒಂದೇ ಸಹಾಯ ಧನವಾಗಿ ಹಕ್ಕು ಸಾಧಿಸಬೇಕಾಗಿರುತ್ತದೆ).
  3. ನೋಂದಾಯಿತ ಕಾರ್ಮಿಕ ಯಾವುದೇ ಬಾಕಿ ಇಲ್ಲದಂತೆ ಪೂರ್ಣವಾಗಿ ವಂತಿಗೆಯನ್ನು ಮಂಡಳಿಗೆ ಪಾವತಿಸಿರಬೇಕು.
  4. ನೋಂದಾಯಿತ ನಿರ್ಮಾಣ ಕಾರ್ಮಿಕನ ಮಗ ಅಥವಾ ಮಗಳು ಮದುವೆ ಸಹಾಯಧನವನ್ನು ಪಡೆಯಲು ವಿವಾಹ ನಿಯಮದಡಿ ಸೂಚಿಸಿರುವ ವಯಸ್ಸನ್ನು ತಲುಪಿರಬೇಕು.
  5. ವಿವಾಹ ನೋಂದಣಾಧಿಕಾರಿಯಿಂದ ಪಡೆದ ವಿವಾಹ ನೋಂದಣಾ ಪತ್ರವನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು.
  6. ವದುವಿನ ಹೆಸರಿನಲ್ಲಿ ಕನಿಷ್ಠ ಮೂರು ವರ್ಷದವರಿಗೂ ನಿಶ್ಚಿತ ಠೇವಣಿ ರೂಪದಲ್ಲಿ ಅಥವಾ ಬಾಂಡ್ ರೂಪದಲ್ಲಿ ಶೇ.50 ರಷ್ಟು ಸಹಾಯಧನವನ್ನು ಇರಿಸಬೇಕು. (ಗೃಹ ಲಕ್ಷ್ಮೀ ಬಾಂಡ್) ಇನ್ನುಳಿದ ಶೇ.50 ರಷ್ಟು ಹಣವನ್ನು ಫಲಾನುಭವಿಯ ಖಾತೆಗೆ ಜಮಾ ಮಾಡುವುದು. ಉಪ ನಿಯಮ 1 ರಲ್ಲಿ ಹೇಳಿರುವಂತೆ ಸಹಾಯಧನದ ಹಕ್ಕುಸಾಧನೆಗಾಗಿ ನಮೂನೆ XXIII ರಲ್ಲಿ ಅರ್ಜಿಯನ್ನು ಸಲ್ಲಿಸಬೇಕು.
  ಪೂರಕ ದಾಖಲಾತಿಗಳು:
 3. ಫಲಾನುಭವಿಯೆಂದು ನೊಂದಣೆಯಾಗಿ ಒಂದು ವರ್ಷದ ನಂತರ ಅರ್ಜಿಯನ್ನು ಸಲ್ಲಿಸುವುದು
 4. ವಂತಿಗೆ ಪ್ರಮಾಣ ಪತ್ರವನ್ನು ಹಿರಿಯ/ಕಾರ್ಮಿಕ ನಿರೀಕ್ಷಕರಿಂದ ಸಲ್ಲಿಸುವುದು
 5. ಉದ್ಯೋಗ ದೃಡೀಕರಣ ಪತ್ರ
 6. ಬ್ಯಾಂಕ್ ಖಾತೆ ವಿವರಗಳು
 7. ವಿವಾಹ ನೋಂದಣಾಧಿಕಾರಿಗಳಿಂದ ಪಡೆದ ವಿವಾಹ ನೋಂದಣಾ ಪತ್ರ
 8. ಮದುವೆಯ ಆಮಂತ್ರಣ ಪತ್ರ
 9. ಮದುವೆ ಕರ್ನಾಟಕ ರಾಜ್ಯದ ಹೊರಗೆ ಜರುಗಿದ್ದಲ್ಲಿ ಅಫಿಡೆವಿಟ್ ಸಲ್ಲಿಸುವುದು
 10. ರೇಷನ್ ಕಾರ್ಡ್
 11. ಮದುವೆಯಾಗಿ ಆರು ತಿಂಗಳೊಳಗೆ ಅರ್ಜಿಯನ್ನುಸಲ್ಲಿಸುವುದು
 12. ಅರ್ಜಿ ಶುಲ್ಕ : NA
  ವಿತರಣಾ ಸಮಯ (ದಿನಗಳು): 60
  ಅನ್ವಯಿಸುವ ವಿಧಾನ:
 13. ಅರ್ಜಿದಾರರು ಅರ್ಜಿಯನ್ನು ಸಲ್ಲಿಸುವುದು
 14. ವಂತಿಗೆ ಪ್ರಮಾಣ ಪತ್ರ ಸಲ್ಲಿಸುವುದು
 15. ಹಿರಿಯ/ಕಾರ್ಮಿಕ ನಿರೀಕ್ಷಕರಿಂದ ಅರ್ಜಿ ಪ್ರಕ್ರಿಯೆ ಮತ್ತು ಪರಿಶೀಲನೆ ಮಾಡಲಾಗುವುದು
 16. ಕಾರ್ಮಿಕ ನಿರೀಕ್ಷಕರಿಂದ ಪರಿಶೀಲನಾ ವರದಿ ಸಿದ್ಧಪಡಿಸಲಾಗುವುದು
 17. ಅಧಿಕಾರಿಯವರಿಂದ ಪರಿಶೀಲನೆ ಮತ್ತು ಅನುಮೋದನೆ