ನಿಯಮ 43: ನೋಂದಾಯಿತ ನಿರ್ಮಾಣ ಮಹಿಳಾ ಕಾರ್ಮಿಕರ ಮಗುವಿನ ಹೆರಿಗೆಗೆ ನೀಡುವ ಸಹಾಯ ಧನ

 1. ಮಂಡಳಿಯ ಕಾರ್ಯದರ್ಶಿಯ ಅಥವಾ ಮಂಡಳಿಯ ಪರವಾಗಿ ನೇಮಕವಾದ ಅಧಿಕೃತ ಅಧಿಕಾರಿಯು ನೋಂದಾಯಿತ ಮಹಿಳಾ ಕಾರ್ಮಿಕಳಿಂದ ಅರ್ಜಿಯನ್ನು ಪಡೆದು ಆಕೆಯ ಗಂಡು ಮಗುವಿನ ಜನನಕ್ಕೆ ರೂ.20000/- ಮತ್ತು ಹೆಣ್ಣು ಮಗುವಿನ ಜನನಕ್ಕೆ ರೂ.30,000/- ಮೊದಲ ಎರಡು ಹೆರಿಗೆಗೆ ಸಹಾಯಧನವನ್ನು ಮಂಜೂರು ಮಾಡಲಾಗುವುದು. (ಮಗುವಿನ ಹೆರಿಗೆ ಆದ ಕುರಿತು ದಾಖಲೆಗಳನ್ನು ಸಲ್ಲಿಸುವುದು)
 2. ಈ ಕೆಳಕಂಡ ಷರತ್ತುಗಳನ್ನು ಪೂರೈಸಿದಾಗ ಮಾತ್ರ ಸಹಾಯ ಧನವನ್ನು ಮಂಜೂರು ಮಾಡಬೇಕಾಗುತ್ತದೆ.
  1. ನೋಂದಾಯಿತ ಮಹಿಳಾ ಕಾರ್ಮಿಕಳು ಎರಡು ಬಾರಿ ಮಾತ್ರ ಸಹಾಯ ಧನವನ್ನು ಪಡೆಯಲು ಅರ್ಹರಾಗಿರುತ್ತಾರೆ (ಎರಡನೇ ಹಕ್ಕು ಸಾಧನೆ ಸಹಾಯ ಧನ ಅರ್ಜಿಯು ಎರಡನೇ ಮಗುವಿನ ಹೆರಿಗೆ ಎಂದು ಹೇಳುವ ಅಫೀಡೆವಿಟ್ ಅನ್ನು ಒಳಗೊಂಡಿರಬೇಕು).
  2. ನೋಂದಾಯಿತ ಮಹಿಳಾ ಕಾರ್ಮಿಕಳು ಯಾವುದೇ ಬಾಕಿ ಇಲ್ಲದಂತೆ ಪೂರ್ಣವಾಗಿ ವಂತಿಗೆಯನ್ನು ಮಂಡಳಿಗೆ ಪಾವತಿಸಿರಬೇಕು.
  3. ಒಂದು ವೇಳೆ ಈಗಾಗಲೇ ನೋಂದಾಯಿತ ಮಹಿಳಾ ಕಾರ್ಮಿಕಳಿಗೆ ಎರಡು ಮಕ್ಕಳಿದ್ದರೆ, ಅವಳು ಈ ಸೌಲಭ್ಯವನ್ನು ಪಡೆಯಲು ಅರ್ಹರಾಗುವುದಿಲ್ಲ.
  4. ಜನನ ಮತ್ತು ಮರಣದ ನೋಂದಾಣಾ ಅಧಿಕಾರಿಯಿಂದ ಜನನದ ಪ್ರಮಾಣ ಪತ್ರವನ್ನು ಪಡೆಯಬೇಕು. ಅಥವಾ ಸರ್ಕಾರಿ ಆಸ್ಪತ್ರೆ, ಕರ್ನಾಟಕ ರಾಜ್ಯದಲ್ಲಿ ನೋಂದಾಯಿತ ಅಂಗೀಕೃತ ಆಸ್ಪತ್ರೆಗಳಲ್ಲಿ ದಾಖಲಾಗಿ ಆ ಸಂಸ್ಥೆಯ ಮುಖ್ಯಸ್ಥರಿಂದ ಸಹಿ ಮಾಡಿದ ಪ್ರಮಾಣ ಪತ್ರವನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು.
  5. ಹೆರಿಗೆ ಸಹಾಯಧನವನ್ನು ತಾಯಿ ಹೆಸರಿನಲ್ಲಿ ಕನಿಷ್ಠ ಮೂರು ವರ್ಷಗಳ ಅವಧಿಗೆ ನಿಶ್ಚಿತ ಠೇವಣಿ ರೂಪದಲ್ಲಿ ಅಥವಾ ಬಾಂಡ್ ರೂಪದಲ್ಲಿ ನೀಡಲಾಗುವುದು (ತಾಯಿ ಲಕ್ಷ್ಮೀ ಬಾಂಡ್).
 3. ಉಪ ನಿಯಮ 1 ರಲ್ಲಿ ಹೇಳಿರುವಂತೆ ಹೆರಿಗೆ ಸಹಾಯಧನದ ಹಕ್ಕು ಸಾಧನೆಗಾಗಿ ನಮೂನೆ XVII ರಲ್ಲಿ ಅರ್ಜಿಯನ್ನು ಸಲ್ಲಿಸಬೇಕು.
 4. ಪೂರಕ ದಾಖಲಾತಿಗಳು:
 5. ಎರಡನೇ ಮಗುವಿನ ಹೆರಿಗೆ ಎಂದು ಅಫಿಡವಿಟ್ ಸಲ್ಲಿಸುವುದು
 6. ಬ್ಯಾಂಕ್ ಖಾತೆ ಪುರಾವೆ
 7. ಮಕ್ಕಳ ಛಾಯಾಚಿತ್ರ
 8. ಉದ್ಯೋಗ ದೃಡೀಕರಣ ಪತ್ರ
 9. ಮಂಡಳಿ ನೀಡಿರುವ ಗುರುತಿನ ಚೀಟಿ/ಸ್ಮಾರ್ಟ್ ಕಾರ್ಡ್
 10. ಡಿಸ್ಚಾರ್ಜ್ ಸಾರಾಂಶ
 11. ಮಗುವಿನ ಜನನ ಪ್ರಮಾಣಪತ್ರ
 12. ಮಗುವಿನ ಜನನದ ಆರು ತಿಂಗಳೊಳಗೆ ಅರ್ಜಿಯನ್ನು ಸಲ್ಲಿಸುವುದು
 13. ಅರ್ಜಿ ಶುಲ್ಕ : NA
  ವಿತರಣಾ ಸಮಯ (ದಿನಗಳು): 30
  ಅನ್ವಯಿಸುವ ವಿಧಾನ:
 14. ಅರ್ಜಿದಾರರು ಅರ್ಜಿಯನ್ನು ಸಲ್ಲಿಸುವುದು
 15. ವಂತಿಗೆ ಪ್ರಮಾಣ ಪತ್ರವನ್ನು ಹಿರಿಯ/ಕಾರ್ಮಿಕ ನಿರೀಕ್ಷಕರಿಂದ ಸಲ್ಲಿಸುವುದು
 16. ಹಿರಿಯ/ಕಾರ್ಮಿಕ ನಿರೀಕ್ಷಕರಿಂದ ಅರ್ಜಿ ಪ್ರಕ್ರಿಯೆ ಮತ್ತು ಪರಿಶೀಲನೆ ಮಾಡಲಾಗುವುದು
 17. ಕಾರ್ಮಿಕ ನಿರೀಕ್ಷಕರಿಂದ ಪರಿಶೀಲನಾ ವರದಿ ಸಿದ್ಧಪಡಿಸಲಾಗುವುದು
 18. ಕಾರ್ಮಿಕ ಅಧಿಕಾರಿಯವರಿಂದ ಪರಿಶೀಲನೆ ಮತ್ತು ಅನುಮೋದನೆ