ನಿಯಮ 39: ಪಿಂಚಣಿ ಸೌಲಭ್ಯ, ಅರ್ಹತೆ ಪಿಂಚಣಿಯ ವಿಧಾನ ಮತ್ತು ಮಂಜೂರಾತಿ ಇತ್ಯಾದಿ.

 1. ಪ್ರತಿ ನೋಂದಾಯಿತ ಕಟ್ಟಡ ಅಥವಾ ಇತರೆ ನಿರ್ಮಾಣ ಕಾರ್ಮಿಕ 60 ವರ್ಷ ವಯೋಮಿತಿ ಪೂರ್ಣಗೊಳಿಸಿರಬೇಕು.
 2. ನೋಂದಾಯಿತ ನಿರ್ಮಾಣ ಕಾರ್ಮಿಕ 60 ವರ್ಷ ವಯಸ್ಸು ಪೂರ್ಣಗೊಳ್ಳುವ ಮುನ್ನ ಕನಿಷ್ಠ 03 ವರ್ಷಗಳು ನಿರಂತರವಾಗಿ ಮಂಡಳಿಯ ಫಲಾನುಭವಿಯಾಗಿ ಮುಂದುವರೆದಿರಬೇಕು.
 3. ನೋಂದಾಯಿತ ನಿರ್ಮಾಣ ಕಾರ್ಮಿಕ 60 ವರ್ಷ ವಯಸ್ಸಿನವರೆಗೂ ಬಾಕಿ ಇಲ್ಲದೆ ವಂತಿಗೆಯನ್ನು ಮಂಡಳಿಗೆ ಪಾವತಿಸಿರಬೇಕು .
 4. ಉಪ ನಿಯಮ (1) ರಡಿಯಲ್ಲಿ ಪಿಂಚಣಿಗೆ ಅರ್ಹರಾದ ಪ್ರತಿ ನೋಂದಾಯಿತ ಕಟ್ಟಡ ಅಥವಾ ಇತರೆ ನಿರ್ಮಾಣ ಕಾರ್ಮಿಕರು ತನ್ನ ಅರ್ಜಿಯನ್ನು ನಮೂನೆ XII ರಲ್ಲಿ ಮಂಡಳಿಗೆ ಸಲ್ಲಿಸಬೇಕು.
 5. ನೋಂದಾಯಿತ ಕಟ್ಟಡ ಅಥವಾ ಇತರೆ ನಿರ್ಮಾಣ ಕಾರ್ಮಿಕನು ತನ್ನ ಫಲಾನುಭವಿಯ ಮೂಲ ಗುರುತಿನ ಚೀಟಿಯನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು.
 6. ಅರ್ಜಿಯನ್ನು ಪರಿಶೀಲಿಸಿದ ನಂತರ ಮಂಡಳಿಯ ನೋಂದಾಯಿತ ಕಟ್ಟಡ ಅಥವಾ ಇತರೆ ನಿರ್ಮಾಣ ಕಾರ್ಮಿಕರಿಗೆ ಪಿಂಚಣಿ ಗುರುತಿನ ಆದೇಶದ ಜೊತೆಗೆ ಎಲೆಕ್ಟ್ರಾನಿಕ್ ಪಿಂಚಣಿ ಗುರುತಿನ ಚೀಟಿಯನ್ನು ನೀಡಬೇಕು.
 7. ಅರ್ಜಿಯೊಂದಿಗೆ ಸಲ್ಲಿಸಿರುವ ದಾಖಲೆಗಳು ಅಪೂರ್ಣ ಎಂದು ಮಂಡಳಿಯು ಪರಿಗಣಿಸಿದರೆ, ಅರ್ಜಿಯನ್ನು ತಿರಸ್ಕರಿಸುವ ಮುನ್ನ ಅರ್ಜಿದಾರರಿಗೆ ಪೂರ್ಣ ಮಾಹಿತಿ ಒದಗಿಸಲು ಕಾಲವಕಾಶವನ್ನು ನೀಡಬೇಕು.
 8. ಪಿಂಚಣಿದಾರ ಮರಣಿಸಿದಾಗ, ಕಾನೂನುಬದ್ದ ಅವಲಂಭಿತರು ಅಥವಾ ಉತ್ತರಾಧಿಕಾರಿಗಳು ಬ್ಯಾಂಕ್ ಖಾತೆಯನ್ನು ಮುಚ್ಚಲು ಪಿಂಚಣಿದಾರರ ಮರಣ ಪ್ರಮಾಣ ಪತ್ರದೊಂದಿಗೆ ಮಂಡಳಿಗೆ ಮಾಹಿತಿ ಸಲ್ಲಿಸಬೇಕು.
 9. ಪಿಂಚಣಿಯ ಮೊತ್ತವು ರೂ.1000/- ಕ್ಕಿಂತ ಮೀರಿರಬಾರದು .
 10. ಫಲಾನುಭವಿಯು ಮಂಜೂರಾತಿ ಪ್ರಾಧಿಕಾರಕ್ಕೆ ಪ್ರತಿ ವರ್ಷ ಜೀವಿತ ಪ್ರಮಾಣ ಪತ್ರ ನಮೂನೆ XII –A (living certificate form XII –A) ಸಲ್ಲಿಸಬೇಕು.
 11. ಪಿಂಚಣಿಯ ಮಂಜೂರಾತಿ ಪ್ರಾಧಿಕಾರವು ಪಿಂಚಣಿದಾರರ ದಾಖಲೆಗಳನ್ನು ನಮೂನೆ XIII ರಲ್ಲಿ ನಿರ್ವಹಿಸಬೇಕು.