ನಿಯಮ 41: ಮಂಡಳಿಯ ಫಲಾನುಭವಿಯೆಂದು ನೋಂದಾಯಿತನಾದ ನಿರ್ಮಾಣ ಕಾರ್ಮಿಕನು 20 ಸಾವಿರ ರೂ ಮೀರದ ಉಪ ಕರಣ ಪೆಟ್ಟಿಗೆ ಹಾಗು ತರಬೇತಿಯನ್ನು ಪಡೆಯಲು ಈ ಕೆಳಕಂಡ ಷರತ್ತುಗಳಿಗೆ ಒಳಪಟ್ಟು ಅರ್ಹನಾಗಿರುತ್ತಾನೆ.

 1. ನೋಂದಾಯಿತ ಫಲಾನುಭವಿಯು 55 ವರ್ಷ ವಯಸ್ಸಿನ ಒಳಗಿರಬೇಕು.
 2. ನೋಂದಾಯಿತ ಫಲಾನುಭವಿಯು ಗಾರೆಕೆಲಸ, ಕೊಳಾಯಿ ರೀಪರಿ, ಮರಗೆಲಸ, ಬಾರ್ ಬೆಂಡಿಂಗ್, ಪೇಂಟಿಂಗ್, ಸ್ಕ್ಯಾಫೋಲ್ಡಿಂಗ್, ಶೆಟರಿಂಗ್, ಟೈಲಿಂಗ್, ವಾಲ್ ಪೈಟಿಂಗ್, ಅರ್ಥ್ ವರ್ಕಿಂಗ್, ಎಲೆಕ್ಟ್ರೀಷಿಯನ್, ವೆಲ್ಡಿಂಗ್, ಸ್ಟೀಲ್ ಫ್ಯಾಬ್ರಿಕೇಟಿಂಗ್, ಇತ್ಯಾದಿ ಕೌಶಲ್ಯ ಅಭಿವೃದ್ದಿಯ ತರಬೇತಿಯನ್ನು ಮಂಡಳಿಯಿಂದ ಅಂಗೀಕೃತವಾದ ಕೌಶಲ್ಯಾಭಿವೃದ್ದಿ ಕೇಂದ್ರಗಳಿಂದ ಪಡೆದಿರಬೇಕು. ತರಬೇತಿ ಕಾರ್ಯಕ್ರಮಗಳು ನೋಂದಾಯಿತ ನಿರ್ಮಾಣ ಕಾರ್ಮಿಕರಿಗೆ ಅಗತ್ಯವಾದ ಕೌಶಲ್ಯತೆಯನ್ನು ನೀಡುತ್ತದೆ. ಕಾರ್ಮಿಕರಿಗೆ ತರಬೇತಿ ಪಡೆಯಲು ನುರಿತ ತರಬೇತುದಾರರು, ಊಟ ಮತ್ತು ವಸತಿ ಸೌಕರ್ಯ ಮಾಸ್ಟರ್ ತರಬೇತಿದಾರರು, ಉಪಕರಣ ಪೆಟ್ಟಿಗೆಯೊಂದಿಗೆ ರಕ್ಷಣಾತ್ಮಕ ಕಿಟ್, ಕೋರ್ಸ್ ಸಾಮಾಗ್ರಿ ಮತ್ತು ಆರೋಗ್ಯದ ಪ್ರಮಾಣಪತ್ರ ಮತ್ತು ತರಬೇತಿದಾರರ ಫಿಟ್ನೆಸ್, ಟ್ರೇನಿಗಾಗಿ ವೆಬ್-ಸಕ್ರಿಯಗೊಳಿಸಿದ ಡೇಟಾಬೇಸ್, ವೇತನ ನಷ್ಠ ಪರಿಹಾರವನ್ನು ಮಂಡಳಿಯು ಭರಿಸುತ್ತದೆ. ಮಂಡಳಿಯು ಖಾಸಗಿ ಮತ್ತು ಸಾರ್ವಜನಿಕ ಸಹಬಾಗಿತ್ವದೊಂದಿಗೆ ಪರಿಷ್ಕೃತ ಕೌಶಲ್ಯತೆ ಹಾಗು ಇತರೆ ಸೌಲಭ್ಯಗಳನ್ನು ತರಬೇತಿ ಪಡೆಯುವವನಿಗೆ ನೀಡಲಾಗುತ್ತದೆ.
 3. ಮಂಡಳಿಯ ನೋಂದಾಯಿತ ಫಲಾನುಭವಿಗೆ ಅವನ ಸದಸ್ಯತ್ವ ಅವಧಿಯಲ್ಲಿ ಒಂದು ಬಾರಿಗೆ ಮಾತ್ರ ಈ ತರಬೇತಿ ಸೌಲಭ್ಯವನ್ನು ನೀಡಲಾಗುವುದು.
 4. ನೋಂದಾಯಿತ ನಿರ್ಮಾಣ ಕಾರ್ಮಿಕನು ಸಹಾಯ ಧನ ಪಡೆಯಲು ಅರ್ಜಿ ನಮೂನೆ XV ರೊಂದಿಗೆ ಕೌಶಲ್ಯ ಪರಿಷ್ಕರಣಾ ತರಬೇತಿಯನ್ನು ಪಡೆದಿರುವ ಮೂಲ ಪ್ರಮಾಣ ಪತ್ರವನ್ನು ನೀಡಬೇಕು.
 5. ಪೂರಕ ದಾಖಲಾತಿಗಳು:
 6. ಗೆಜೆಟೆಡ್ ಅಧಿಕಾರಿಯಿಂದ ದೃಢೀಕರಿಸಲ್ಪಟ್ಟ ಗುರುತು ಚೀಟಿಯ ಛಾಯಾಪ್ರತಿ ನೀಡತಕ್ಕದ್ದು
 7. ಗ ಬ್ಯಾಂಕ್ ಖಾತೆಯ ಪುರಾವೆ
 8. ಗ ಫಲಾನುಭವಿಯು ಸದಸ್ಯತ್ವ ಅವಧಿಯಲ್ಲಿ ಒಂದು ಬಾರಿ ಮಾತ್ರ ಈ ಸೌಲಭ್ಯವನ್ನು ಪಡೆಯಬಹುದಾಗಿದೆ
 9. ಗಫಲಾನುಭವಿಯು ತರಬೇತಿ ಪಡೆಯಲು 55 ವರ್ಷ ಒಳಗಿರಬೇಕು
 10. ಅರ್ಜಿ ಶುಲ್ಕ : NA
  ವಿತರಣಾ ಸಮಯ (ದಿನಗಳು): Nill
  ಅನ್ವಯಿಸುವ ವಿಧಾನ:
 11. ಗ ಅರ್ಜಿದಾರರು ಅರ್ಜಿಯನ್ನು ಸಲ್ಲಿಸುವುದು
 12. ಗವಂತಿಗೆ ಪ್ರಮಾಣ ಪತ್ರವನ್ನು ಹಿರಿಯ/ಕಾರ್ಮಿಕ ನಿರೀಕ್ಷಕರಿಂದ ಸಲ್ಲಿಸುವುದು
 13. ಗ ಕಾರ್ಮಿಕ ನಿರೀಕ್ಷಕರಿಂದ ಅರ್ಜಿ ಪ್ರಕ್ರಿಯೆ ಮತ್ತು ಪರಿಶೀಲನೆ ಮಾಡಲಾಗುವುದು
 14. ಗಮಂಡಳಿಯಿಂದ ಪರಿಶೀಲನೆ ಮತ್ತು ಅನುಮೋದನೆ
 15. ಗತರಬೇತಿ ಕೇಂದ್ರದಿಂದ ತರಬೇತಿದಾರರಿಗೆ ತರಬೇತಿ ಪ್ರಮಾಣ ಪತ್ರವನ್ನು ನೀಡಲಾಗುವುದು