ಡಾ|| ಅಂಬೇಡ್ಕರ್ ಸಹಾಯ ಹಸ್ತ ಯೋಜನೆಯಡಿ ಮಂಡಳಿಯ ವತಿಯಿಂದ ಟ್ರೈನಿಂಗ್ ಕಂ ಟೂಲ್ ಕಿಟ್ ವಿಶೇಷ ತರಬೇತಿ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಕಾರ್ಯಕ್ರಮದ ಪ್ರಮುಖ ಉದ್ದೇಶವು ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಲ್ಲಿ ವೃತ್ತಿಪರ ಕೌಶಲ್ಯವನ್ನು ಹೆಚ್ಚಿಸಿ ಆರ್ಥಿಕ ಮತ್ತು ಸಾಮಾಜಿಕ ಬದುಕನ್ನು ಉತ್ತಮಗೊಳಿಸಿ ಕಾರ್ಮಿಕರನ್ನು ಬಡತನದಿಂದ ಹೊರತರವುದಾಗಿರುತ್ತದೆ. ನಿರ್ಮಾಣದ ವಿವಿಧ ವಹಿವಾಟುಗಳಿಗೆ ತರಬೇತಿ ಮಾದರಿಗಳನ್ನು ನ್ಯಾಷನಲ್ ಸ್ಕಿಲ್ಸ್ ಅರ್ಹತೆಗಳ ಮಾರ್ಗಸೂಚಿಯೆಂತೆ ವಿನ್ಯಾಸಗಗೊಳಿಸಿ ನಂತರ ಮೌಲ್ಯಮಾಪನಕ್ಕೆ ಒಳಪಡಿಸಿ, ಪಠ್ಯಕ್ರಮವನ್ನು ಶೇ.30% ಲಿಖಿತ ಶೇ.50 ಪ್ರಯೋಗಿಕ 15% ವೃತ್ತಿಪರ ಕೌಶಲ್ಯ ಹಾಗು 5% ಆರೋಗ್ಯ ಮತ್ತು ಸುರಕ್ಷತೆಗೆ ಆದ್ಯತೆ ನೀಡಲಾಗಿದೆ. ವೃತ್ತಿಪರ ಕೌಶಲ್ಯಗಳನ್ನು ಪ್ರಯೋಗಿಕ ತರಬೇತಿ ಕಾರ್ಯಕ್ರಮಗಳಿಗೆ ಪರೀಕ್ಷಿಸಿ ಉತ್ತಮಗೊಳಿಸಿ. ನಿರ್ಮಾಣ ಹಂತದ ವಿವಿಧ ಕೌಶಲ್ಯಗಳನ್ನು ಘಟಕವಾರು ಪುನರಾವರ್ತಿಸಿ ಕಾರ್ಮಿಕರನ್ನು ಉದ್ದಿಮೆಸಿದ್ದ ಕೆಲಸಗಾರ ಆಗಿ ತರಬೇತಿ ನೀಡಲಾಗುವುದು. ಕೆಲಸದಲ್ಲಿ ನೈಪುಣ್ಯತೆ ಮತ್ತು ಉತ್ಸಾಹ ನಿರ್ಮಾಣದಲ್ಲಿನ ಸುಧಾರಿತ ಗುಣಮಟ್ಟಗಳನ್ನು ತರಬೇತಿಯಲ್ಲಿ ನೀಡಲಾಗುವುದು.

  1. ತರಬೇತಿ ಪಡೆದ ನುರಿತ ಕೆಲಸಗಾರರನ್ನು ಸುಜನಾತ್ಮಕ ಆಲೋಚನೆ ಹಾಗು ವಿಶ್ಲೇಷಣಾತ್ಮಕ ಸಾಮರ್ಥ್ಯಗಳ ಮೂಲಕ ಉತ್ತಮ ಫಲಿತಾಂಶದೊಂದಿಗೆ ನಿಪುಣ ಕೆಲಸ ಮಾಡಲು ತರಬೇತಿ ನೀಡಲಾಗುವುದು.
  2. ನಿರ್ದಿಷ್ಟ ಕೆಲಸದ ನಿರ್ವಹಣೆಯಲ್ಲಿ ಕಡಿಮೆ ವೆಚ್ಚ, ಸಮಯದ ಉಳಿತಾಯ ಹಾಗು ವಸ್ತು ನಿಷ್ಟೆಯ ಜೊತೆಗೆ ಸಂಯೋಜಿತ ಕೆಲಸದ ದಕ್ಷತೆಯಿಂದ ಹಣ, ಸಮಗ್ರ ಮತ್ತು ಮಾನವ ಶಕ್ತಿಯನ್ನು ಉಳಿಸಿ ನಿರ್ದಿಷ್ಟ ಗುರಿ ಮತ್ತು ಫಲಿತಾಂಶದೊಂದಿಗೆ ಕೆಲಸವನ್ನು ನಿರ್ವಹಿಸಿ ಬಡತನದಿಂದ ಮುಕ್ತಿ ಪಡೆದು ಜೀವನ ಮಟ್ಟವನ್ನು ಸುಧಾರಿಸಿ ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸುವಂತೆ ತರಬೇತಿ ನೀಡುವುದೊಂದಿಗೆ ಪರಿಸರ ರಕ್ಷಣೆ, ಉತ್ತಮ ವಾತಾವರಣದ ರಕ್ಷಣೆ ಹಾಗು ಕಲಿಕೆಯ ವಿವಿಧ ಮತ್ತು ಹಾಯಮಾನಗಳನ್ನು ರೂಡಿಸಿಕೊಳ್ಳಬಹುದಾಗಿದೆ. ಪ್ರಾರಂಭದ ಹಂತದಲ್ಲಿ ಮಂಡಳಿಯ 21 ಟ್ರೇಡ್ ಗಳನ್ನು ಗುರುತಿಸಿದೆ.
  3. ನಿಗಧಿತ ಟ್ರೇಡ್ ನಲ್ಲಿ ತರಬೇತಿಗೆ ಅನುಕೂಲವಾದ ದಿನಗಳ ತರಬೇತಿ ಪೂರ್ಣಗೊಳಿಸಿದೆ. ನೋಂದಾಯಿತ ನಿರ್ಮಾಣ ಕಾರ್ಮಿಕ ಈ ಕೆಳಕಂಡ ಸೌಲಭ್ಯವನ್ನು ಪಡೆಯುತ್ತಾನೆ.

ನಿರ್ಮಾಣ ವೃತ್ತಿಗಳು ತರಬೇತಿ ವಿಷಯ
ಮೇಸನ್ ಗ್ರೇಡ್-2 (ಬೇಸಿಕ್ & ಎಂಟ್ರಿ ಲೆವಲ್)
ಮೇಸನ್ ಗ್ರೇಡ್-1
ಮೇಸ್ತ್ರಿ ಹೆಡ್ ಮೇಸನ್ ಗ್ರೂಪ್ ಲೀಡರ್
ಬಾರ್ ಬೆಂಡಿಂಗ್ ಬಾರ್ ಬೆಂಡಿಂಗ್
ಶಟರಿಂಗ್ ಫಾರಂ ವರ್ಕ್ / ಶಟರಿಂಗ್ & ಸ್ಕೆಫೋಲ್ಡಿಂಗ್
ಟೈಲಿಂಗ್ ಟೈಲಿಂಗ್ (ಟೈಲ್ & ಗ್ರಾನೈಟ್)
ವಾಲ್ ಪೈಟಿಂಗ್ ವಾಲ್ ಪೈಟಿಂಗ್
ವುಡ್ ಪೈಟಿಂಗ್ ವುಡ್ ಪೈಟಿಂಗ್
ವುಡ್ ಪೈಟಿಂಗ್ ವುಡ್ ಪಾಲಿಶ್ & ಪೈಟಿಂಗ್
ಡಿಸೈನ್ ಪೈಟಿಂಗ್ ಇಂಟಿರಿಯರ್ ಡಿಸೈನ್ ವರ್ಕ್ಸ್ (ಪೈಟಿಂಗ್ಸ್)
ವಾಟರ್ ಪ್ರೂಫಿಂಗ್ & ಟರ್ ಮೈಟ್ ಟ್ರೀಟ್ ಮೆಂಟ್ ವಾಟರ್ ಪ್ರೂಫಿಂಗ್ & ಟರ್ ಮೈಟ್ ಟ್ರೀಟ್ ಮೆಂಟ್
ಫ್ಲಂಬಿಂಗ್ ಫ್ಲಂಬಿಂಗ್ (ವಾಟರ್ ಸಪ್ಲೈ & ಸ್ಯಾನಿಟರಿ ವರ್ಕ್ಸ್)
ಕಾರ್ಪ್ಂಟರಿ ಕಾರ್ಪ್ಂಟರಿ ಗ್ರೇಡ್-2
ಕಾರ್ಪ್ಂಟರಿ ಗ್ರೇಡ್-1
ಎಲೆಕ್ಟ್ರಿಕಲ್ ವೈರಿಂಗ್ & ಫಿಟಿಂಗ್ಸ್
ಎಲೆಕ್ಟ್ರಿಕಲ್ ವೈರಿಂಗ್ & ಫಿಟಿಂಗ್ಸ್ (ಜನರಲ್ & ಡೊಮೆಸ್ಟಿಕ್)
ಎಲೆಕ್ಟ್ರಿಕಲ್ ವೈರಿಂಗ್ & ಫಿಟಿಂಗ್ಸ್ ಇಂಡಸ್ಟ್ರಿಯಲ್ ಕಮರ್ಷಿಯಲ್ ಹೈ ರೈಸ್ ಸ್ಟ್ರಕ್ಚರ್ಸ್
ಎಲೆಕ್ಟ್ರಿಕಲ್ ವೈರಿಂಗ್ & ಫಿಟಿಂಗ್ಸ್ ರಿಪೇರ್ಸ್ ಆಫ್ ಡೊಮೆಸ್ಟಿಕ್ ಅಪ್ಲೈಯನ್ಸ್ ಎಸಿ ರಿಪೇರ್ಸ್ & ಮೈನ್ಟೆಂನೆನ್ಸ್
ಆಪರೇಷನ್ & ಮೈಂಟೆನನ್ಸ್ ಆಫ್ ಕನ್ಸಟ್ರಕ್ಷನ್ ಎಕ್ವಿಪ್ಮೆಂಟ್ಸ್ ಆಪರೇಷನ್ & ಮೈಂಟೆನೆನ್ಸ್ ಆಫ್ ಕನ್ಸಟ್ರಕ್ಷನ್ ಎಕ್ವಿಪ್ಮೆಂಟ್ಸ್
ವರ್ಕ್ ಇನ್ಸ್ಪೆಕ್ಷನ್ ಮೆಜರ್ ಮೆಂಟ್ಸ್ ಕನ್ಸ್ಟ್ರಕ್ಷನ್ ಸುಪರ್ವಿಸನ್ / ವರ್ಕ್ ಇನ್ಸ್ಪೆಕ್ಷನ್
ಅರ್ಥ್ ವರ್ಕ್ಸ್ ಅರ್ಥ್ ವರ್ಕ್ಸ್ - ಕಟ್ಟಿಂಗ್ ಫಿಲಿಂಗ್ & ಕಂಪ್ಯಾಕ್ಷನ್
ಡ್ರಿಲಿಂಗ್ ಪೈಲ್ ಫೌಂಡೆಶನ್ & ಬೋರ್ ವೆಲ್ ಪವರ್ ಡ್ರಿಲಿಂಗ್
ಕನ್ಸಟ್ರಕ್ಷನ್ ಡೆಮೊಲಿಷನ್ & ಡಿಸ್ಪೋಸಲ್ ಕನ್ಸಟ್ರಕ್ಷನ್ ಡೆಮೊಲಿಷನ್ & ಡಿಸ್ಪೋಸಲ್
ಫಾಲ್ಸ್ ಸೀಲಿಂಗ್ ಇಂಟೀರಿಯರ್ ಡಿಸೈನಿಂಗ್ ವರ್ಕ್ (ಫಾಲ್ಸ್ ಸೀಲಿಂಗ್)
ಫ್ಯಾಬ್ರಿಕೇಷನ್ ಸ್ಟೀಲ್ ಫ್ಯಾಬ್ರಿಕೇಷನ್
ಬ್ಲಾಕ್ ಮೆಕಿಂಗ್ ಪ್ರಿ ಫ್ಯಾಬ್ರಿಕೇಟೆಡ್ ಕನ್ಸಟ್ರಕ್ಷನ್ ಪ್ರಾಡೆಕ್ಟ್ಸ್ & ಬ್ಲಾಕ್ ಪ್ರೊಡೆಕ್ಷನ್
ತಾತ್ಕಾಲಿಕ ಶೆಡ್ ಗಳ ನಿರ್ಮಾಣ ತುರ್ತು /ವಿಶೇಷ ಸಂದರ್ಭದಲ್ಲಿ ಟ್ರಸ್ಟ್ ಗಳ ಅಳವಡಿಕೆ ಪೈಪ್ ಪೆಂಡಲ್ ಅಳವಡಿಕೆ, ತಾತ್ಕಾಲಿಕ ಝಿಂಕ್ ಶೆಡ್ಗಳ ನಿರ್ಮಾಣ